ಹಾವು ಕಚ್ಚಿ ಇಬ್ಬರ ಸಾವು !


21-06-2017 368

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಎರಡು ಪ್ರತ್ಯೆಕ ಘಟನೆಗಳಲ್ಲಿ ಹಾವು ಕಚ್ಚಿ ಇಬ್ಬರು ಸಾವನ್ನಪ್ಪಿರು ದುರ್ಘಟನೆ ನಡೆದಿದೆ. ಹಾಸಿಗೆಯಲ್ಲಿ ನಾಗರಹಾವು ಕಚ್ಚಿದ್ದ ಲಕ್ಣ್ಮಣ ಲಿಂಬನ್ನವರ(೫೦) ಸಾವನ್ನಪ್ಪಿರುವ ವ್ಯಕ್ತಿ, ಜಿಲ್ಲೆಯ ಸವದತ್ತಿ ತಾಲ್ಲೂಕಿನ ಓಬಲದಿನ್ನಿ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಇವರು ಹಾವು ಸಹಿತ ಆಸ್ಪತ್ರೆಗೆ ಬಂದಿದ್ದರು, ಆದರೆ ವಿಷದ ಪ್ರಮಾಣ ದೇಹದಲ್ಲಿ ಹೆಚ್ಚು ಸೇರಿದ್ದರಿಂದ ಸಾವು ಸಂಭವಿಸಿದೆ. ಇನ್ನೊಂದೆಡೆ ಬೈಲಹೊಂಗಲ ತಾಲ್ಲೂಕಿನ ಹೊಸಕೋಟೆ ಗ್ರಾಮದಲ್ಲಿ ಹಾಸಿಗೆಯಲ್ಲಿ ಹಾವು ಕಚ್ಚಿ ರಾಮಪ್ಪಾ ಕೆಳಗಿನಮನಿ (೨೯), ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.