ಸಕ್ಕರೆ ಕಾರ್ಖಾನೆಗಳ ಸುಧಾರಣೆಗೆ ಕ್ರಮ


28-02-2020 281

ಮಂಡ್ಯ, ಫೆ.28: ನಷ್ಟಕ್ಕೊಳಗಾಗಿರುವ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸಂಕಷ್ಟಕ್ಕೆ ಸಿಲುಕಿರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಸರ್ಕಾರಿ ಸ್ವಾಮ್ಯದ ಮಂಡ್ಯದ ಮೈಷುಗರ್‍ ಕಾರ್ಖಾನೆಗಳು ಪುನಶ್ಚೇತನಕ್ಕೆ ಒಡ್ಡಿಕೊಳ್ಳಲಿವೆ.

ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‍ ಅವರು ಈ ಕುರಿತು ಮಾತನಾಡುತ್ತ, “ರೋಗಗ್ರಸ್ತ ಮೈಷುಗರ್‍ ಕಾರ್ಖಾನೆಯ ಪುನಶ್ಚೇತನಕ್ಕೆ ಈವರೆಗೆ 700 ಕೋಟಿ ರೂಪಾಯಿಗೂ ಅಧಿಕ ಹಣದ ವಿನಿಯೋಗವಾಗಿದ್ದರೂ ಕಾಯಕಲ್ಪ ಸಾಧ್ಯವಾಗಿಲ್ಲ. ಹೆಚ್ಚು ಸಂಖ್ಯೆಯ ಕಾರ್ಮಿಕರನ್ನು ಪೊರೆಯುತ್ತಿದ್ದ ಈ ಕಾರ್ಖಾನೆಯ ತೆಕ್ಕೆಯಲ್ಲೀಗ 154 ಮಂದಿಯಿದ್ದು, ಅವರಲ್ಲಿ 37 ಕಾಯಂ, 84 ಹಂಗಾಮಿ ಹಾಗೂ 36 ಗುತ್ತಿಗೆ ನೌಕರರಾಗಿದ್ದಾರೆ. 2017ರ ಜುಲೈನಿಂದ ವೇತನ ಪಾವತಿ ಬಾಕಿಯಿದ್ದು, ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಯೋಜನೆ ಘೋಷಿಸಲಾಗಿದೆ” ಎಂದು ತಿಳಿಸಿದರು.

ರೈತರ ಜೀವನಾಡಿ ಎಂದೇ ಕರೆಸಿಕೊಂಡಿದ್ದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಕೆಲ ವರ್ಷಗಳಿಂದೀಚೆಗೆ 275 ಕೋಟಿ ರೂಪಾಯಿ ಸಾಲದ ಶೂಲದಲ್ಲಿ ಸಿಲುಕಿದ್ದು, ಸರಿಸುಮಾರು 100 ಕಾರ್ಮಿಕರು ವೇತನವಿಲ್ಲದೆ ಪರದಾಡುತ್ತಿದ್ದಾರೆ ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Sugar Factory Revival Shivaram Hebbar Private partnership