ಪೇಜಾವರ ಶ್ರೀಗಳಿಗಾಗಿ ಬೆಂಗಳೂರಿನಲ್ಲಿ ಸಿಧ್ಧತೆ!


28-12-2019 176

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪೇಜಾವರ ಶ್ರೀಗಳು ಒಂದು ವೇಳೆ ವಿಧಿವಶರಾದಲ್ಲಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುವುದು ಎಂದು ಹೇಳಲಾಗಿದೆ. ಹಾಗೇ ಅವರ ಅಂತಿಮ ಕ್ರಿಯೆಯನ್ನು ಬೆಂಗಳೂರಿನ ವಿದ್ಯಾಪೀಠ ಮಠದಲ್ಲಿ ನೆರವೇರಿಸಲಾಗುವುದು ಎಂದೂ ಕೇಳಿಬಂದಿದೆ. ಅಂತ್ಯ ಕ್ರಿಯೆಗೆ ಮೊದಲು ಪಾರ್ಥಿವ ಶರೀರಕ್ಕೆ ಜನರು ಗೌರವ ಅರ್ಪಿಸಲು ಅನುವು ಮಾಡಿ ಕೊಡಲು ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಇಡಲಾಗುವುದು ಎಂದೂ ಹೇಳಲಾಗಿದೆ. ವಿದ್ಯಾಪೀಠದ ಸುತ್ತಮುತ್ತ ಬಂದೋಬಸ್ತ್ ಕಾರ್ಯ ಆರಂಭವಾಗಿದ್ದು ಅನೇಕ ಗಣ್ಯರು ಭಾಗವಹಿಸುವ ಸಾಧ್ಯತೆ ಇರುವುದರಿಂದ ಸೂಕ್ತ ಸುರಕ್ಷಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ತರಲಾಗುತ್ತದೆ ಎಂದೂ ಸುದ್ದಿ ಮೂಲಗಳು ತಿಳಿಸಿವೆ. ವಿದ್ಯಾಪೀಠ ಕ್ಷೇತ್ರದ ಸುತ್ತಮುತ್ತಲಿನ ಜನರಿಗೆ ಸುರಕ್ಷತಾ ಕ್ರಮಗಳ ಕಾರಣದಿಂದಾಗಿ ಓಡಾಡತಕ್ಕೆ ಕೊಂಚ ತೊಡಕಾಗಬಹುದು ಎಂದು ಹೇಳಲಾಗಿದೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Pejawar Pejavara Vishwesha Teertha Swamy