ಸಿದ್ಧರಾಮಯ್ಯ ಕಾಂಗ್ರೆಸ್ ಗೆ ಬರುವ ಮುನ್ನವೇ ನಾನು ಕಾಂಗ್ರೆಸ್ ಗೆ ಬಂದಿದ್ದೇನೆ !


13-06-2017 538

ಬೆಂಗಳೂರು:- ಕೆ.ಪಿ.ನಂಜುಂಡಿ ಹಾಗೂ ವಿಶ್ವಕರ್ಮ ಸಮಾಜದ ಸ್ವಾಮೀಜಿಗಳು ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕೆ.ಪಿ.ನಂಜುಂಡಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೆ.ಪಿ.ನಂಜುಂಡಿ ಯವರಿಗೆ ಕಾಂಗ್ರೆಸ್ ನಿಂದ ಅನ್ಯಾಯವಾಗಿದೆ. ನಮ್ಮ ನಂಬಿಕೆಗೆ ಕಾಂಗ್ರೆಸ್ ಚ್ಯುತಿ ಮಾಡಿದೆ, ಸಿದ್ದರಾಮಯ್ಯ ಮಾಡಿರುವ ಈ ಮೋಸದಿಂದ ವಿಶ್ವಕರ್ಮ ಸಮಾಜಕ್ಕೆ ಏನೂ ನಷ್ಟವಿಲ್ಲ, ನಮ್ಮ‌ಒಗ್ಗಟ್ಟು ಹೆಚ್ಚುತ್ತದೆ. ಆದರೆ ನೀವು ಒಂದು ಬಲಿಷ್ಠ ಸಮಾಜದ ಬೆಂಬಲ ಕಳೆದುಕೊಂಡಿದ್ದೀರಿ ಎಂದು ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದ್ದಾರೆ. ಕೆ.ಪಿ.ನಂಜುಂಡಿ ಅವರು ಹದಿನಾರು ವರ್ಷಗಳ ಕಾಲ ಕಾಂಗ್ರೆಸ್ ಗೆ ನಿಷ್ಠೆಯಿಂದ ದುಡಿದಿದ್ದಾರೆ ಎಂದು ವಿಶ್ವಕರ್ಮ ಸಮಾಜದ ಸ್ವಾಮೀಜಿಗಳು ಹೇಳಿದ್ದಾರೆ,  ಎಂ.ಎಲ್.ಸಿ ಆಗೋದಕ್ಕೆ ನನ್ನ ಏಕೆ ಪರಿಗಣಿಸಿಲ್ಲ, ನನಗೆ ಭಾಷಣ ಮಾಡಲು ಬರೋದಿಲ್ವಾ? ವಿದ್ಯಾವಂತನಲ್ವಾ? ಸಂಘಟನೆ ಮಾಡೋದು ಗೊತ್ತಿಲ್ವಾ?. ಆದರೂ ಏಕೆ ಕೈ ಬಿಟ್ಟರು ಎಂದು ಕಾಂಗ್ರೆಸ್ ನಾಯಕರು ಹೇಳಬೇಕು. ನಾನಿನ್ನೂ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟಿಲ್ಲ. ನನಗೆ ಸಿದ್ದರಾಮಯ್ಯ ಅವರಿಗಿಂತ ಸೋನಿಯಾ ಗಾಂಧಿಯವರು ಚೆನ್ನಾಗಿ ಗೊತ್ತಿದೆ. ಅವರ ಕೈಯಲ್ಲೇ ರಾಜೀನಾಮೆ ಕೊಟ್ಟು ಬರುತ್ತೇನೆ ಎಂದರು. ಯಡಿಯೂರಪ್ಪ ಅವರೊಂದಿಗೆ ನಮ್ಮ ಸ್ವಾಮೀಜಿಯವರು ಸಂಪರ್ಕದಲ್ಲಿದ್ದಾರೆ, ಮಾತುಕತೆ ನಡೆಸಿದ್ದಾರೆ. ಆದರೆ ಒಮ್ಮೆಗೆ ಆತುರದ ನಿರ್ಧಾರ ಬೇಡವೆಂದು, ಯೋಚಿಸಿ ಯಾವ ಪಕ್ಷ ಸೇರಬೇಕು ಎಂದು ಸ್ವಾಮೀಜಿಗಳು ನಿರ್ಧಾರ ಮಾಡುತ್ತಾರೋ ಆ ಪಕ್ಷ ಸೇರುತ್ತೇನೆ ಎಂದರು. ಸಿದ್ದರಾಮಯ್ಯ ಅವರಿಗಿಂತ ಕಾಂಗ್ರೆಸ್ ನಲ್ಲಿ ನಾನು ಸೀನಿಯರ್. ಅವರಿಗೆ ಮಾತ್ರ ಎಲ್ಲ ಬೇಕು. ನಮ್ಮ ಸಮಾಜಕ್ಕೆ ಮಾತ್ರ ಬೇಡವೇ? ಸಿದ್ದರಾಮಯ್ಯ ಅವರನ್ನು‌ ಮತ್ತೊಬ್ಬ ದೇವರಾಜ ಅರಸು ಆಗುತ್ತಾರೆ ಎಂದು ಕೊಂಡಿದ್ದೆವು, ಆದರೆ ಅದೆಲ್ಲಾ ಈಗ ಸುಳ್ಳಾಗಿದೆ. ವಿಶ್ವಕರ್ಮ ಸಮಾಜ ಕಾಂಗ್ರೆಸ್ ಋಣದಲ್ಲಿಲ್ಲ, ಆದರೆ ಕಾಂಗ್ರೆಸ್ ಪಕ್ಷವೇ ನಮ್ಮ ಋಣದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ 224 ಶಾಸಕರಿಗೂ ವಿಶ್ವಕರ್ಮ ಸಮಾಜ ಬೇಕು. ಅವರ ಮತ ಬೇಕು. ಮತ ಕೊಡಿಸಬೇಕು. ಆದರೆ ನಂಜುಂಡಿಗೆ ಸಮಾಜಕ್ಕೆ ಬಲ ತುಂಬವ ಕೆಲಸ ಮಾತ್ರ ಯಾರೂ ಮಾಡಿಲ್ಲ ಎಂದು ದೂರಿದ್ದಾರೆ. ಸಿದ್ಧರಾಮಯ್ಯ ಸಿಎಂ ಆದಾಗ ಎಲ್ಲರಿಗೂ ಒಂದು ಆಸೆಯಿತ್ತು. ಮತ್ತೊಮ್ಮೆ ದೇವರಾಜ ಅರಸು ಅವರನ್ನು ನೋಡಬಹುದು ಎಂಬದು, ಆದರೆ ಅದು ಆಗಲಿಲ್ಲ ಶೋಷಿತ ಸಮಾಜಗಳನ್ನು ಮೇಲೆತ್ತಿದ್ದರೆ, ಆಗ ಅವರು ದೇವರಾಜ ಅರಸು ಆಗುತ್ತಿದ್ದರು. ಸಿದ್ಧರಾಮಯ್ಯ ಕಾಂಗ್ರೆಸ್ ಗೆ ಬರುವ ಮುನ್ನವೇ ನಾನು ಕಾಂಗ್ರೆಸ್ ಗೆ ಬಂದಿದ್ದೇನೆ. ಅವರು ಬಂದು ಎಂಟು-ಒಂಭತ್ತು ವರ್ಷವಾಯ್ತು. ಅದರೆ ನಾನು 16 ವರ್ಷದಿಂದ ಕಾಂಗ್ರೆಸ್ ಗಾಗಿ ದುಡಿದಿದ್ದೇನೆ. ಅವರಿಗೆ ಎಲ್ಲವೂ ಬೇಕು. ನಮಗೆ ಬೇಡ್ವಾ?  ಎಂದು ಸಿಎಂ ಸಿದ್ಧರಾಮಯ್ಯ ಅವರಿಗೆ ನಂಜುಂಡಿ ನೇರ ಪ್ರಶ್ನೆ ಮಾಡಿದ್ದಾರೆ. ನಾವು ಕಾಂಗ್ರೆಸ್ ಋಣದಲ್ಲಿಲ್ಲ ಕಾಂಗ್ರೆಸ್ ನವರೇ ನಮ್ಮ ಸಮಾಜದ ಋಣದಲ್ಲಿದ್ದಾರೆ. ನಾನು ಎಂದೂ ಪಕ್ಷಕ್ಕೆ ದ್ರೋಹ ಮಾಡಿಲ್ಲ. ಒಂದು ಮಟ್ಟಕ್ಕೆ ಒಂದು ಸಮಾಜವನ್ನು ನಿರ್ಲಕ್ಷಿಸಬೇಕು. ಆದರೆ ಈ ಮಟ್ಟಕ್ಕೆ ಅಲ್ಲ ಎಂದು ಸಿದ್ಧರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ