ವದಂತಿ ಸುಳ್ಳು ಎಂದ ಅಣ್ಣಾಮಲೈ

ಬೆಂಗಳೂರು: ಕೇಂದ್ರ ಸರ್ಕಾರ ಇನ್ನು ನನ್ನ ರಾಜೀನಾಮೆ ಅಂಗೀಕರಿಸಿಲ್ಲ, ಇದರಿಂದಾಗಿ ನಾನು ಸರ್ಕಾರದ ಒಂದು ಭಾಗವಾಗಿ ಉಳಿದಿದ್ದೇನೆ. ನಾನು ಸರ್ಕಾರ ಸೇರಿದಂತೆ ಯಾವುದೇ ಸಂಘ-ಸಂಸ್ಥೆಗಳಲ್ಲಿ ಕ್ರಿಯಾಶೀಲನಾಗಿಲ್ಲ ಎಂದು ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.
ಯಾವುದೇ ಸಂಘ-ಸಂಸ್ಥೆಯನ್ನು ತಾವು ಸೇರಿಲ್ಲ, ಅದರ ಶಾಖೆಯನ್ನು ಕೊಯಂಬತ್ತೂರಿನಲ್ಲಿ ಆರಂಭಿಸಿಲ್ಲ ಸಂಘ-ಸಂಸ್ಥೆಯೊಂದನ್ನು ಸೇರಿ ಅಣ್ಣಾಮಲೈ ಸಕ್ರಿಯರಾಗಿದ್ದಾರೆ ಎನ್ನುವ ವದಂತಿಗಳು ಸುಳ್ಳಾಗಿದ್ದು, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಇಂತಹ ವದಂತಿಗಳನ್ನು ಯಾರೂ ನಂಬಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ಸುತ್ತಾಟ, ಧಾರ್ಮಿಕ ಸ್ಥಳಗಳಿಗೆ ಭೇಟಿ, ಸಾರ್ವಜನಿಕರೊಂದಿಗಿನ ಸಂವಾದಗಳ ಮೂಲಕ ಜ್ಞಾನ ವೃದ್ಧಿಸಿಕೊಳ್ಳಲು ಪ್ರಯತ್ನ ನಡೆಸಿದ್ದೇನೆ. ನನ್ನ ರಾಜೀನಾಮೆಯು ಅಂಗೀಕಾರಗೊಂಡ ನಂತರ ನಾನು ಮುಂದೆ ಕೈಗೊಳ್ಳುವ ನಿಲುವು -ಕ್ರಮಗಳ ಬಗ್ಗೆ ಸ್ಪಷ್ಟಪಡಿಸುತ್ತೇನೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಒಂದು ಕಮೆಂಟನ್ನು ಬಿಡಿ