ಪ್ರೀತಿ ನಿರಾಕರಿಸಿದ್ದಕ್ಕೆ ಪೋರ್ನ್ ವೆಬ್ ಸೈಟ್ ನಲ್ಲಿ ನಂಬರ್ ಹಾಕಿದ!


05-09-2019 282

ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಗೆಳತಿಯ ಮೊಬೈಲ್ ಸಂಖ್ಯೆಯನ್ನು ಪೋರ್ನ್ ವೆಬ್‍ಸೈಟಿಗೆ ಹಾಕಿದ ಕಾಮುಕನಿಗಾಗಿ ಇಂದಿರಾನಗರ ಪೊಲೀಸರು ಶೋಧ ನಡೆಸಿದ್ದಾರೆ. ಇಂದಿರಾನಗರದ ಮೊಹಮ್ಮದ್ ಮುದಸ್ಸಿರ್ ಗೆಳತಿಯ ಮೊಬೈಲ್ ಸಂಖ್ಯೆಯನ್ನು ಪೋರ್ನ್ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದ್ದು, ಸೆಕ್ಸ್‍ಗಾಗಿ ಮೇಲಿನ ನಂಬರ್‍ಗೆ ಸಂಪರ್ಕಿಸಿ ಎಂದು ತಿಳಿಸಿದ್ದನು. ಕಳೆದ ಆ.30ರಿಂದ ಯುವತಿಯ ಮೊಬೈಲ್ ನಂಬರಿಗೆ ನಿರಂತರವಾಗಿ ಮೆಸೇಜ್ ಗಳು ಬಂದಿದ್ದು ಯುವತಿಯು ಶೋಧ ನಡೆಸಿದಾಗ  ಪೋರ್ನ್ ವೆಬ್ ಸೈಟ್‍ಗೆ ಮೊಬೈಲ್ ಸಂಖ್ಯೆಯನ್ನು ಅಪ್‍ಲೋಡ್ ಆಗಿರುವುದು ತಿಳಿದು ಬಂದಿದೆ.

ಮೊಹಮ್ಮದ್ ಮುದಸ್ಸಿರ್ ಕೃತ್ಯದಿಂದ ಸಮಸ್ಯೆ ಎದುರಿಸಿದ್ದ ಯುವತಿ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ. ಈ  ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಯುವತಿಗೆ ಮೆದಸ್ಸಿರ್ ಮೇಲೆ ಅನುಮಾನ ಬಂದಿದ್ದು, ಆಕೆಯ ಫೇಕ್ ಪ್ರೊಫೈಲ್ ಸೃಷ್ಟಿ ಮಾಡಿ ಮೊಬೈಲ್ ನಂಬರ್ ನೀಡಿದ್ದ.

ಈ ಹಿಂದೆ ನಗರದ ಜೀವನ್ ಭೀಮಾ ನಗರದಲ್ಲೂ ಇಂತಹದೇ ಪ್ರಕರಣ ನಡೆದಿತ್ತು. ಮೆಡಿಕಲ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ಲೈಂಗಿಕ ಕಿರುಕುಳ ಪ್ರಕರಣ ದಾಖಲು ಮಾಡಿದ್ದರು. ಯುವತಿಗೆ ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದ ಯುವಕ ಆಕ್ಷೇಪಾರ್ಹ ಫೋಟೋಗಳನ್ನು ಯುವತಿಗೆ ಕಳುಹಿಸಿದ್ದ. ಯುವತಿಯ ನಿವಾಸದ ಬಳಿ ಮೆಡಿಕಲ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಆತ ಫೇಸ್‍ಬುಕ್ ರಿಕ್ವೆಸ್ಟ್ ಕಳುಹಿಸಿ ಯುವತಿಯ ಸ್ನೇಹ ಮಾಡಿದ್ದ ಎಂದು ವಿಚಾರಣೆಯಲ್ಲಿ ಕಂಡುಬಂದಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Love failure Website College student Police case