ಕೊನೆಗೂ ಡಿಕೆ ಗುಣವಾಗಿ ಮನೆಕಡೆಗೆ10-09-2020 318

ಅನೇಕ ದಿನಗಳ ಆಸ್ಪತ್ರೆ ವಾಸದ ನಂತರ ಇಂದು ಡಿ ಕೆ ಶಿವಕುಮಾರ್ ಮನೆಗೆ ಹೋಗಲಿದ್ದಾರೆ. ಕೊರೋನಾ ಲಕ್ಷಣಗಳು ಕಾಣಿಸಿಕೊಂಡ ನಂತರ ರಾಜಾಜಿನಗರದ ಸುಗುಣಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗುವ ಮೊದಲೇ ಮನೆ ಸೇರಿದ್ದ ಡಿಕೆ ಮತ್ತೆ ಅನಾರೋಗ್ಯ ಪೀಡಿತರಾಗಿ ಜಯನಗರದ ಅಪೋಲೋ ಆಸ್ಪತ್ರೆಯ ಪುಪ್ಪುಸ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿ ಪ್ರಖ್ಯಾತ ಪುಪ್ಪುಸ ತಜ್ಞ ಡಾ ಮೆಹತಾ ರವರ ಆರೈಕೆಯಲ್ಲಿ ಗುಣಮುಖರಾಗಿದ್ದಾರೆ. ಅವರ ಅಸಂಖ್ಯ ಬೆಂಬಲಿಗರು ಅವರನ್ನು ಕಾಣಲು ಉತ್ಸುಕರಾಗಿ ಆಸ್ಪತ್ರೆ ಯಲ್ಲಿ ನೋಡಲೂ ಹೋಗಲಾಗದೆ ದುಃಖಿತರಾಗಿದ್ದರು. ಹಾಗಾಗಿ ಈಗ ಅವರ ನೆಚ್ಚಿನ ನಾಯಕ ಗುಣಮುಖರಾಗಿ ಮತ್ತೊಮ್ಮೆ ತಮ್ಮನ್ನು ಮುನ್ನಡೆಸಲು ಸಜ್ಜಾಗಿರುವುದು ಎಲ್ಲರಿಗೂ ಸಂತಸ ತಂದಿದೆ.


ಒಂದು ಪ್ರತಿಕ್ರಿಯೆಗಳು ಬಿಡಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ