ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ "ವರುಣ" ಸ್ಟುಡಿಯೋ ಉದ್ಘಾಟನೆ11-05-2017 1669

ಗೃಹ ಕಚೇರಿ ಕೃಷ್ಣ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ "ವರುಣ" ಸ್ಟುಡಿಯೋ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನೆರವೇರಿಸಿದರು. 

ಎಲ್ಲ ಮಾಧ್ಯಮಗಳ ಜೊತೆಗೆ ಮುಖ್ಯಮಂತ್ರಿಗಳ ಸಂವಾದಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಉದ್ದೇಶದಿಂದ ಹೊಸ ಸ್ಟುಡಿಯೋ ಅಸ್ತಿತ್ವಕ್ಕೆ ಬಂದಿದೆ.

ಮಾಧ್ಯಮಗಳ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡು ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಸ್ಟುಡಿಯೊದಲ್ಲಿ ಕಲ್ಪಿಸಲಾಗಿದೆ. 

ಮುಖ್ಯಮಂತ್ರಿಗಳ ವಸತಿ ಮತ್ತು ಗೃಹ ಕಚೇರಿಗಳಲ್ಲಿ ಸ್ಥಳಾವಕಾಶದ ಕೊರತೆ ಇರುವ ಕಾರಣಕ್ಕಾಗಿ, ಗೃಹಕಚೇರಿ ಕೃಷ್ಣಾ ಕ್ಕೆ ಹೊಂದಿಕೊಡಂತೆ ಸುಸಜ್ಜಿತ ಸ್ಟುಡಿಯೋ ನಿರ್ಮಿಸಲಾಗಿದೆ.

ಈ ಸ್ಟುಡಿಯೋದಲ್ಲಿ ಮುಖ್ಯಮಂತ್ರಿಗಳನ್ನು ಸಂದರ್ಶಿಸಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ, ಬೆಳಕು, ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾದ ಹಿನ್ನೆಲೆ ಪರದೆ, ಟೆಲಿಪ್ರಾಂಪ್ಟರ್, ರೆಕಾರ್ಡಿಂಗ್ ಸಲಕರಣೆಗಳು, ಕಂಪ್ಯೂಟರ್ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳ ವರದಿಗಾರರು ತಮ್ಮ ಕ್ಯಾಮೆರಾಗಳ ಜತೆ ನೇರವಾಗಿ ಬಂದು ಈ ಸ್ಟುಡಿಯೋದಲ್ಲಿ ಸಂದರ್ಶನಗಳನ್ನು ನಡೆಸಬಹುದು.

ಇದರ ಜತೆಗೆ ಮುಖ್ಯಮಂತ್ರಿಗಳು ಕಾಲಕಾಲಕ್ಕೆ ನೀಡುವ ಸಂದೇಶಗಳು, ಹೇಳಿಕೆಗಳ ರೆಕಾರ್ಡಿಂಗ್ ಕೂಡಾ ಈ ಸ್ಟುಡಿಯೋದಲ್ಲಿ ನಡೆಸಲಾಗುವುದು.


ಒಂದು ಪ್ರತಿಕ್ರಿಯೆಗಳು ಬಿಡಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ